ಹತ್ತಾರು ಕನಸುಗಳ ಹೊತ್ತು ಮನಸು ಮರಳಿದೆ ಮಗುವ ಮುಗ್ಧ ಮನದೆಡೆಗೆ ಬದುಕಿನ ಬವಣೆ ಸಹಿಸಲಾರದೇ .. ಓ ಆಘಾತವೇ , ಹೃದಯಕೆ ಬಡಿದು ಉಸಿರನೋಯ್ಯದಿರು .. ಹೊತ್ತು ಮುಳುಗುವ ಮುನ್ನ ನಾ ಕಂಡ ಕನಸಿಗೆ ಅರ್ಥ ಪೂರೈಸಬೇಕಿದೆ ..
ಪ್ರಣಯಪಕ್ಷಿಗಳಲ್ಲ ಸೋತ ಪ್ರೇಮಿಗಳೂ ಅಲ್ಲ , ಒಲವ ಝೇ೦ಕಾರವಿದೆ ನಮ್ಮೊಳಗೆ ಹೃದಯ ತುಡಿತವಿದೆ ಮಾತೊಳಗೆ , ನಕ್ಕು ನಗಿಸುವ ಮನಸು ಮಾತು ಮುಗಿಸದ ಕವಿತೆ ಇನ್ನೇನೋ ಹೇಳುವ ಕನಸು ನಾಳೆಯಲಿ ಜೊತೆಯಲೇ ಇರಬೇಕು ಘಂಟೆ ಘಳಿಗೆ ! ಪ್ರೀತಿಸುವ ಬಗೆಯಿದೆ ಪ್ರೇಮಿಗಳೂ ಅಲ್ಲ , ನಲ್ಲ ನಲ್ಲೆಗೂ ಹೆಚ್ಚು ಆ ಜೀವ ಧಾತನೆ ಬಲ್ಲ .. ಅದು ನಾನು - ನೀನು ! ನೀ ನನ್ನ ಜೀವಕೆ ಗೆಳೆಯ ನಾ ನಿನ್ನ ಭಾವಕೆ ಗೆಳತಿ..
Friday 31 July 2009
ನಾನು ನನ್ನವರನ್ನು ಪ್ರೀತಿಸುತ್ತೇನೆ ಮೊದಲಿಗಿಂತಲೂ ಜಾಸ್ತಿ ! ಮತ್ತೆ ನನ್ನ ಹೆಸರಲ್ಲಿ ತೆಗೆದುಕೊಂಡಿದ್ದಾರೆ ನಾಲ್ಕು ಎಕರೆ ಆಸ್ತಿ :)
ಅಂದು ಕೃಷ್ಣ ಊದಿದ ಕೊಳಲು ರಾಧೆ ನೀಡಿದ ನೃತ್ಯ ಬೆಳದಿಂಗಳ ಬ್ರ೦ದಾವನದಲಿ ಅದು ಪ್ರೀತಿಗಾಗಿ ....... ಇಂದು ನಾನು ಗೀಚಿದ ಹಾಡು ನೀನು ಮಾಡಿದ ನೃತ್ಯ ಇದು ಪ್ರೀತಿಸುವ ಡೊ೦ಬರಾಟದ ಬದುಕಿಗಾಗಿ ...... !